ಬರ ಪರಿಸ್ಥಿತಿಯಲ್ಲಿ ಈ ಜಿಲ್ಲೆಗಳ ಹಾಲಿನ ದರ 2 ರೂಪಾಯಿ ಕಡಿತ; ರೈತರಿಗೆ ಸಂಕಷ್ಟ

0

ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತಾಪಿ ವರ್ಗ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲಿಯೂ ಈ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದೆ. ಈ ಕಾರಣ ರೈತರ ಪ್ರತಿ ಲೀಟರ್ ಹಾಲಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಇಂತಹ ಸಮಯದಲ್ಲಿ ರೈತರ ಬಗ್ಗೆ ಕಾಳಜಿ ತೋರಿಸಬೇಕಿದ್ದ ಧಾರವಾಡ ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿ ದರದಲ್ಲಿ 2 ರೂ. ಕಡಿತಗೊಳಿಸಲು ಮುಂದಾಗಿದೆ.

Reduction in milk price in these districts

ಧಾರವಾಡ ಹಾಲು ಒಕ್ಕೂಟ ಧಾರವಾಡ, ಉತ್ತರ ಕನ್ನಡ ಮತ್ತು ಗದಗ ಮೂರು ಜಿಲ್ಲೆ ವ್ಯಾಪ್ತಿಯನ್ನು ಹೊಂದಿದೆ. ಅಕ್ಟೋಬರ್ 19 ರಂದು ನಡೆದ ಸಭೆಯಲ್ಲಿ ಧಾರವಾಡ ಒಕ್ಕೂಟ ಪ್ರತಿ ಲೀಟರ್ ಹಾಲಿಗೆ 2 ರೂ. ದರ ಕಡಿತಗೊಳಿಸುವ ನಿರ್ಣಯ ಕೈಗೊಂಡಿದೆ. ಇದು ಈಗ ಹಾಲು ಉತ್ಪಾದಕ ರೈತರಿಗೆ ಸಂಕಷ್ಟ ಉಂಟುಮಾಡಿದೆ.

ಪಶು ಆಹಾರದ ಬೆಲೆಯಲ್ಲಿ ಹೆಚ್ಚಳ:

ರಾಜ್ಯದಲ್ಲಿ ಸದ್ಯ ಭೀಕರ ಬರ ಇರುವ ಕಾರಣದಿಂದ ಹಾಲಿನ ಅಭಾವ ಉಂಟಾಗುವ ಎಲ್ಲ ಸಾಧ್ಯತೆಗಳು ಹೆಚ್ಚಿವೆ. ಇದೇ ಸಮಯದಲ್ಲಿಯೇ ಪಶು ಆಹಾರದ ಬೆಲೆಯಲ್ಲಿ ಸಾಕಷ್ಟು ಬೆಲೆ ಏರಿಕೆಯಾಗಿದೆ. ಹೀಗಾಗಿ ಸರ್ಕಾರವೂ ರೈತರ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಅದು ಕೂಡ ರೈತರ ಅಕೌಂಟ್‌ಗೆ ನೇರವಾಗಿ ಹಣವನ್ನು ಹಾಕಲಾಗುತ್ತಿದೆ.

ಇದನ್ನೂ ಸಹ ಓದಿ : ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಗೆ ಕರ್ನಾಟಕ 15,000 ಕೋಟಿ ಹೂಡಿಕೆ ನಿರೀಕ್ಷೆ; ಸಚಿವ ಎಂ. ಬಿ ಪಾಟೀಲ್‌

ದಯವಿಟ್ಟು ಹೀಗೆ ಮಾಡಬೇಡಿ

ಬರಗಾಲದ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಸಾಕುವುದು ಸಹ ತುಂಬಾ ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ಹಾಲಿದ ದರದಲ್ಲಿ 2 ರೂ. ಕಡಿತ ಮಾಡುತ್ತಿರುವುದು ರೈತರಿಗೆ ಸಂಕಷ್ಟವನ್ನು ತಂದಿಟ್ಟಿದೆ. ಈ ಸಮಯದಲ್ಲಿ ಹೆಚ್ಚಿನ ಪ್ರೋತ್ಸಾಹ ಧನ ನೀಡಿ ರೈತರಿಗೆ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು, ಆದರೆ ಧಾರವಾಡ ಹಾಲು ಒಕ್ಕೂಟ 2 ರೂ. ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ರೈತರ ಹಾಲಿನ ದರ ಕಡಿತ ಮಾಡುವುದನ್ನು ತಪ್ಪಿಸಬೇಕೆಂದು ಹಾಲು ಉತ್ಪಾದಕ ರೈತರು ಮುತ್ತನಗೌಡ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಮಳೆ ಇಲ್ಲದೆ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಅದರಲ್ಲಿಯೂ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗೆ ಹಸಿ ಮೇವಿನ ಕೊರತೆ ಸಹ ಎಲ್ಲೆಡೆ ಕಂಡು ಬರುತ್ತಿದೆ. ಇದರಿಂದ ಹಾಲಿನ ಇಳುವರಿಯು ಕುಂಠಿತಗೊಂಡಿದೆ. ಪಶು ಆಹಾರದ ಬೆಲೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿಯೇ ಸರ್ಕಾರ ಪ್ರೋತ್ಸಾಹ ಧನ ಸಹ ಹೆಚ್ಚಿಸಿದೆ. ಈ ಪ್ರೋತ್ಸಾಹ ಧನದ ಹಣವನ್ನು ಯಾವುದೇ ಒಕ್ಕೂಟಗಳು ತಮ್ಮ ಬಳಿ ಇಟ್ಟುಕೊಳ್ಳದೇ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆದೇಶಿಸಿತ್ತು.

Leave A Reply

Your email address will not be published.