ಚಂದ್ರಗ್ರಹಣ 2023: ಗ್ರಹಣದ ಸಮಯ ಯಾವಾಗ? ಗ್ರಹಣ ಯಾವ್ಯಾವ ದೇಶಗಳಲ್ಲಿ ಗೋಚರಿಸುತ್ತದೆ?

0

ನಮ್ಮ ಪೂರ್ವಜರು ಆಕಾಶದಲ್ಲಿ ಕಾಣುವ ಅಥವಾ ಸಂಭವಿಸುವ ಗ್ರಹಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರು. ಗ್ರಹಣ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ಭಯ ಉಂಟಾಗುತ್ತದೆ. ಈ ಗ್ರಹಣವು 2023 ರ ಕೊನೆಯ ಚಂದ್ರಗ್ರಹಣವಾಗಿದೆ.

chandra grahan 2023

ಚಂದ್ರಗ್ರಹಣದ ದಿನಾಂಕ ಮತ್ತು ಸಮಯ 2023:

  • ಚಂದ್ರಗ್ರಹಣದ ದಿನಾಂಕ 2023 – ಶನಿವಾರ 28 ಅಕ್ಟೋಬರ್ 2023
  • ಚಂದ್ರಗ್ರಹಣ 2023 ದಿನಾಂಕ: ಶನಿವಾರ, ಅಕ್ಟೋಬರ್ 28, 2023 1:04 AM ನಿಂದ 2:24 AM ವರೆಗೆ.
  • ಅವಧಿ: 1 ಗಂಟೆ 19 ನಿಮಿಷಗಳು.

2023 ರ ಚಂದ್ರ ಗ್ರಹಣದ ಹೆಸರು:

ಈ ಸಮಯದಲ್ಲಿ ಗೋಚರಿಸುವ ವರ್ಷದ ಕೊನೆಯ ಚಂದ್ರಗ್ರಹಣವು ಪಾರ್ಶ್ವ ಚಂದ್ರಗ್ರಹಣ ಅಥವಾ ಪಾಕ್ಷಿಕ ಚಂದ್ರಗ್ರಹಣವಾಗಿದೆ. ಗ್ರಹಣಗಳು ನೈಸರ್ಗಿಕ ವಿಪತ್ತುಗಳು ಮತ್ತು ಸಮಸ್ಯೆಗಳನ್ನು ಉಂಟುಮಾಡಬಹುದು ಆದರೆ ಮಾನವರ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. 

ಇದನ್ನೂ ಸಹ ಓದಿ; ಬೆಂಗಳೂರಿನಾದ್ಯಂತ ತರಕಾರಿಗಳು ಲೋಹಗಳಿಂದ ಕಲುಷಿತ; ಸಂಶೋಧಕರಿಂದ ವರದಿ

ಈ ದಿನ ಏನು ಮಾಡಬೇಕು?

ಹದಿನೈದು ದಿನಗಳಿಗೊಮ್ಮೆ ನಡೆಯುವ ಚಂದ್ರಗ್ರಹಣವು ಮಧ್ಯರಾತ್ರಿಯಲ್ಲಿ ಸಂಭವಿಸುವುದರಿಂದ ನಾವು ಯಾವುದೇ ಆಚರಣೆಗಳನ್ನು ಮಾಡುವ ಅಗತ್ಯವಿಲ್ಲ. ಆದಾಗ್ಯೂ, ಅಕ್ಟೋಬರ್ 28 ರಂದು, ಸಂಜೆ ಮೊದಲು ಭೋಜನವನ್ನು ಮಾಡಬೇಕು. ಅಂದರೆ ಚಂದ್ರೋದಯಕ್ಕೆ ಮುಂಚೆಯೇ ನಾವು ಭೋಜನ ಮಾಡಬೇಕು. ಸರಳ ಊಟ ಮಾಡಿ ರೋಗಿಗಳು, ಗರ್ಭಿಣಿಯರು, ವೃದ್ಧರು, ಚಿಕ್ಕ ಮಕ್ಕಳು ರಾತ್ರಿ 8 ಗಂಟೆಯೊಳಗೆ ರಾತ್ರಿ ಊಟ ಮುಗಿಸಿ ಹಣ್ಣು, ಮಜ್ಜಿಗೆ, ಹಾಲು ಸೇವಿಸಬಹುದು.

ಎಂಜಲುಗಳನ್ನು ಫ್ರಿಜ್ ನಲ್ಲಿಡಬೇಡಿ ಅಥವಾ ಮತ್ತೆ ಕಾಯಿಸಬೇಡಿ. ಈ ದಿನ ರಾತ್ರಿ ಊಟದ ನಂತರ ಉಳಿದ ಪದಾರ್ಥಗಳನ್ನು ಪ್ರಾಣಿಗಳಿಗೆ ತಿನ್ನಿಸಿ ಮತ್ತು ಪಾತ್ರೆಗಳನ್ನು ತೊಳೆದು ಅಡುಗೆಮನೆಯನ್ನು ಸ್ವಚ್ಛವಾಗಿಡಿ. ಮರುದಿನ ಅಕ್ಟೋಬರ್ 29 ರಂದು ಮುಂಜಾನೆ ಗಂಗಾಜಲ ಅಥವಾ ಗೋಮೂತ್ರವನ್ನು ಮನೆ, ದೇವರ ಕೋಣೆಯಲ್ಲಿ ಸಿಂಪಡಿಸಿ ಮತ್ತು ದೇವರ ಪೂಜೆ ಮತ್ತು ಅಡುಗೆ ಮಾಡಬಹುದು. ಗ್ರಹಣ ಹಿಡಿಯುವ ಮೊದಲು ಬಟ್ಟೆ, ಬಳಸಬೇಕಾದ ವಸ್ತುಗಳ ಮೇಲೆ ದರ್ಬೆ ಅಥವಾ ಗರಿಕೆ ಇಡಿ, ಗ್ರಹಣ ಬಾಧಿಸುವುದಿಲ್ಲ.

ಚಂದ್ರಗ್ರಹಣ ಈ ದೇಶಗಳಲ್ಲಿ ಗೋಚರಿಸುತ್ತದೆ:

ಭಾರತ, ಬೆಲ್ಜಿಯಂ, ಗ್ರೀಸ್, ಫಿನ್‌ಲ್ಯಾಂಡ್, ಪೋರ್ಚುಗಲ್, ಥೈಲ್ಯಾಂಡ್, ಹಂಗೇರಿ, ಈಜಿಪ್ಟ್, ಟರ್ಕಿ, ಇಂಡೋನೇಷ್ಯಾ, ಇಟಲಿ, ಮ್ಯಾನ್ಮಾರ್, ಸ್ಪೇನ್ ಸೇರಿದಂತೆ ಹಲವು ದೇಶಗಳಲ್ಲಿ ಈ ಗ್ರಹಣ ಗೋಚರಿಸಲಿದೆ.

in-The-Sky.org ಚಂದ್ರಗ್ರಹಣವನ್ನು ವೀಕ್ಷಿಸಲು ಒಂದು ಮಾರ್ಗವನ್ನು ಸಿದ್ಧಪಡಿಸಿದೆ. ಇದು ನೈಋತ್ಯ ಆಕಾಶದಲ್ಲಿ ನವದೆಹಲಿಯಿಂದ ಗೋಚರಿಸುತ್ತದೆ. ಮಹಾಗ್ರಹಣದ ಕ್ಷಣದಲ್ಲಿ ಚಂದ್ರನು ದಿಗಂತದಿಂದ 62 ಡಿಗ್ರಿ ಎತ್ತರದಲ್ಲಿದ್ದಾನೆ.

Leave A Reply

Your email address will not be published.