KSRTC: ಶಕ್ತಿ ಯೋಜನೆ ಎಫೆಕ್ಟ್, ಸಾರಿಗೆ ನಿಗಮಗಳಿಗೆ ನುಂಗಲಾಗದ ತುತ್ತು.!
ಕರ್ನಾಟಕ ಸರ್ಕಾರವು ಈ ಭಾರೀ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದ ಬಳಿಕವು ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ ತುಂಬಾ ಹಣದ ಕೊರತೆ ಉಂಟಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗೆ 2023 ರ ಸಾಲಿನ ಬಜೆಟ್‌ನಲ್ಲಿ 2,800 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ. ಹಣಕಾಸು ಇಲಾಖೆ ಪ್ರತಿ ತಿಂಗಳು 293 ರೂ. ನಂತೆ ನಾಲ್ಕೂ ನಿಗಮಗಳಿಗೆ ಬಿಡುಗಡೆ ಮಾಡುತ್ತಿದೆ. ಆದರೆ ಪ್ರತಿ ತಿಂಗಳು ಸರಾಸರಿ 20 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, 450 ಕೋಟಿ ರೂ. ವೆಚ್ಚವಾಗುತ್ತಿದೆ. ಕೊರತೆಯಾಗುತ್ತಿರುವ ಉಳಿದ ಹಣವನ್ನು ಹೊಂದಿಸುವುದು ಕಷ್ಟವಾಗುತ್ತಿದೆ.
ಇದನ್ನೂ ಸಹ ಓದಿ : ಉದ್ಯೋಗ ಖಾತ್ರಿ ಕೆಲಸದ ದಿನ ಹೆಚ್ಚಳ; ಕರ್ನಾಟಕ ಬರ ಪರಿಸ್ಥಿತಿ ಕಾಪಾಡಲು ಸರ್ಕಾರದ ನಿರ್ಧಾರ
ಈ ಹಿನ್ನೆಲೆಯಲ್ಲಿ “ಶಕ್ತಿ” ಯೋಜನೆಗೆ 2,800 ಕೋಟಿ ರೂ. ಸಾಕಾಗುವುದಿಲ್ಲ. ಇದು ನಿಯಮಗಳ ಪ್ರಕಾರ ಕಷ್ಟಸಾಧ್ಯ ಯಾಕೆಂದರೆ, ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವನ್ನು ಹಣಕಾಸು ಇಲಾಖೆ ಹೊಂದಿಸಬೇಕಾಗುತ್ತದೆ. ಹೆಚ್ಚುವರಿ ಹಣ ಮೀಸಲಿಡಬೇಕಾದರೆ ಅದಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗುತ್ತದೆ. ಜೊತೆಗೆ ಸದನದಲ್ಲೂ ಅಂಗೀಕಾರ ಪಡೆಯಬೇಕಾಗುತ್ತದೆ. ಈ ಮಧ್ಯೆ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಬಹುತೇಕ ಮಹಿಳೆಯರ ಪ್ರಯಾಣ ಒಂದೇ ರೀತಿ ಇದ್ದು, ಇದಕ್ಕೆ ಹಣಕಾಸು ಇಲಾಖೆ ಅಪಸ್ವರ ಎತ್ತಿದೆ. ಇದು ಸಾರಿಗೆ ನಿಗಮಗಳಿಗೆ ಸಂಕಷ್ಟವಾಗಿದೆ.