ಬಿಗ್ ಬಾಸ್ ಸೀಸನ್ 10: ವಿಜೇತರಿಗೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?
‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಕೇವಲ 2 ದಿನಗಳು ಮಾತ್ರ ಬಾಕಿಯಿದೆ. ಈ ಬಾರಿಯ ಸೀಸನ್ ಬಹಳ ವಿಶೇಷವಾಗಿರುತ್ತದೆ ಎನ್ನುವ ಚರ್ಚೆ ನಡೀತಿದೆ. ಸುದ್ದಿಗೋಷ್ಠಿ ನಡೆಸಿ ಬಿಗ್ಬಾಸ್ ಹೊಸ ಸೀಸನ್ ಬಗ್ಗೆ ವಿಚಾರವನ್ನು ಹಂಚಿಕೊಳ್ಳಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಹಾಗೂ ನಟ, ನಿರೂಪಕ ಕಿಚ್ಚ ಸುದೀಪ್ ಮಾಧ್ಯಮಗಳ ಮುಂದೆ ಮಾತನಾಡಿದರು. ಪ್ರಶಾಂತ್ ನಾಯಕ್ ಮಾತನಾಡಿ “ಈ ಬಾರಿ ಬಿಗ್ ಬಾಸ್ ತುಂಬಾ ಹೊಸದಾಗಿರುತ್ತದೆ. ಮನೆ, ಲುಕ್, ಲೇಔಟ್ ಎಲ್ಲವೂ ವಿಭಿನ್ನವಾಗಿರುತ್ತದೆ. ಅದರಲ್ಲೂ ಸುದೀಪ್ ಲುಕ್ ಬೇರೆ ಬೇರೆಯಾಗಿರುತ್ತದೆ. ಹತ್ತು ಹಲವು ವಿಶೇಷಗಳಿವೆ. ಸುದೀಪ್ ಸರ್ ಸಹ ಒಂದಷ್ಚು ಔಟ್ಫುಟ್ ಕೊಟ್ಟಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಸೀಸನ್ 10 ಕಂಪ್ಲೀಟ್ ಹೊಸದಾಗಿ ಇರುತ್ತದೆ” ಎಂದಿದ್ದಾರೆ.
“ಅಕ್ಟೋಬರ್ 8ಕ್ಕೆ ಕಲರ್ ಫುಲ್ ಬಿಗ್ ಬಾಸ್ ನೋಡಬಹುದು. ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ 10ನೇ ಸೀಸನ್’ ನಿರೂಪಣೆ ಮಾಡಲು ಉತ್ಸುಕರಾಗಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ನಿರೂಪಣೆಗೂ ಅವರು ಆದ್ಯತೆ ನೀಡುತ್ತಾರೆ. ಬಿಗ್ಬಾಸ್ ಮನೆ ಲೇಔಟ್ ಯಾವ ರೀತಿ ಇರುತ್ತೆ ಅನ್ನೋದನ್ನು ಮೊದಲ ದಿನ ಸುದೀಪ್ ವಿವರಿಸಲಿದ್ದಾರೆ” ಎಂದಿದ್ದಾರೆ. ಬಿಗ್ಬಾಸ್ ಸೀಸನ್-10ರ ವಿಜೇತರಿಗೆ ಯಾವ ಬಹುಮಾನ ಸಿಗುತ್ತದೆ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಪ್ರಶಾಂತ್ ನಾಯಕ್ “ಪ್ರತಿವರ್ಷದಂತೆ ಈ ಬಾರಿಯೂ 50 ಲಕ್ಷ ರೂ. ಹಣ ಬಹುಮಾನವಾಗಿ ಸಿಗಲಿದೆ. ಅದು ಬಿಟ್ಟು ಟಾಸ್ಕ್ ಆಡಿದಾಗ ಒಂದಷ್ಟು ಬಹುಮಾನ ಕಳೆದ ಬಾರಿ ಸಿಕ್ಕಿತ್ತು. ಒಟ್ನಲ್ಲಿ ಈ ಬಾರಿ ಕೂಡ 50 ರೂ. ಲಕ್ಷ ರೂ. ಬಹುಮಾನ ಇರಲಿದೆ” ಎಂದಿದ್ದಾರೆ.
ಇದನ್ನೂ ಸಹ ಓದಿ: ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ತಿದ್ದುಪಡಿ ಪ್ರಕ್ರಿಯೆ ಪ್ರಾರಂಭ
“ಯಾವ ಕ್ಷೇತ್ರದ ವ್ಯಕ್ತಿಗಳು ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನುವುದು ಮುಖ್ಯವಲ್ಲ. 16ರಿಂದ 17 ಬೇರೆ ವೇರೆ ವ್ಯಕ್ತಿತ್ವದವರನ್ನು ದೊಡ್ಮನೆಗೆ ಕಳುಹಿಸುತ್ತೇವೆ. ಎಲ್ಲಾ ತರಹದವರ ಮಿಶ್ರಣ ಇರಬೇಕು. ಸೋಶಿಯಲ್ ಮೀಡಿಯಾದಲ್ಲಿ ಒಂದೇ ದಿನಕ್ಕೆ ಸ್ಟಾರ್ ಆಗುವವರು ಇರ್ತಾರೆ. ಅವರನ್ನೆಲ್ಲಾ ಕಳುಹಿಸೋಕೆ ಸಾಧ್ಯವಿಲ್ಲ. ಈ ಸೀಸನ್ಗೆ ಎಂತಹ ಸ್ಪರ್ಧಿಗಳು ಬೇಕು ಅನ್ನೋದನ್ನು ಮನಸ್ಸಿನಲ್ಲಿಟ್ಟಿಕೊಂಡು ಆಯ್ಕೆ ನಡೀತಿದೆ. ಖಂಡಿತ ಈ ಬಾರಿಗ ಶೋಗೆ ಬೆಸ್ಟ್ ಎನ್ನಿಸುವವರನ್ನು ಕಳುಹಿಸುತ್ತೇವೆ”
“ಖಂಡಿತ ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳು ಇರ್ತಾರೆ. ಟಿವಿ, ಸೋಶಿಯಲ್ ಮೀಡಿಯಾ ಅಷ್ಟೇಯಾಕೆ ಕಾಮನ್ಮನ್ ಕೂಡ ಇರಬಹುದು. ಈಗಾಗಲೇ ಒಬ್ಬ ಸ್ಪರ್ಧಿ ಯಾರು ಅನ್ನೋದನ್ನು ಅನುಬಂಧ ಕಾರ್ಯಕ್ರಮದಲ್ಲಿ ಹೇಳಿದ್ದೇವೆ. ಉಳಿದವರು ಯಾರು ಅನ್ನೋದು ಗೊತ್ತಾಗುತ್ತದೆ”
“ನಮಗೆ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಬಹಳ ಒತ್ತಡ ಇರುತ್ತದೆ. ಸಾಕಷ್ಟು ಜನ ಮೆಸೇಜ್, ಫೋನ್ ಮಾಡುತ್ತಿರುತ್ತಾರೆ. ಮನೆಯೊಳಗೆ ಒಳ್ಳೆಯವರು ಕೆಟ್ಟವರು ಅನ್ನೋದು ಇರಲ್ಲ. ಮಹಾಭಾರತದಲ್ಲಿ ಒಳ್ಳೆಯವರು ಕೆಟ್ಟವರು ಇದ್ದರು. ಪಾಂಡವರು ಏನು ತಪ್ಪು ಮಾಡಿಲ್ವಾ? ಕೌರವರು ಏನು ಒಳ್ಳೆಯದು ಮಾಡಿಲ್ವಾ? ಅದೇ ರೀತಿ ಒಂದು ಮನೆಯಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲರೂ ಇರುತ್ತಾರೆ. ಅದಕ್ಕೆ ತಕ್ಕಂತೆ ಸ್ಪರ್ಧಿಗಳು ಆಯ್ಕೆ ಆಗಿರುತ್ತದೆ. ಒಳ್ಳೆಯವರನ್ನು ಮಾತ್ರ ಕಳುಹಿಸಿದರೆ ಚೆನ್ನಾಗಿರಲ್ಲ”
“ಸ್ಪರ್ಧಿಗಳು ಸರಿಯಿಲ್ಲ ಎನಿಸಿದರೆ ವೋಟಿಂಗ್ ಆಯ್ಕೆ ಇದೆ. ಕೆಲವೊಮ್ಮೆ ಆರಂಭದಲ್ಲಿ ಚೆನ್ನಾಗಿಲ್ಲ ಎಂದವರು ಕೊನೆಗೆ ಗೆದ್ದವರು ಇದ್ದಾರೆ. 16 ಬೇರೆ ಬೇರೆ ಕ್ಷೇತ್ರದ ವ್ಯಕ್ತಿತ್ವಗಳನ್ನು ಸೇರಿಸಿ ಶೋ ಮಾಡಲಾಗುತ್ತದೆ. ಕೇವಲ 50 ಜನರ ಅಭಿಪ್ರಾಯವೇ ಸರಿ ಎನ್ನುವುದಕ್ಕೆ ಆಗಲ್ಲ. ಆಟ ಶುರುವಾದ ಮೇಲೆ ಸ್ಪರ್ಧಿಗಳ ಮೇಲಿನ ಅಭಿಪ್ರಾಯ ಬದಲಾಗಬಹುದು” ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಮಾಹಿತಿ ನೀಡಿದ್ದಾರೆ.