ರೇಷನ್ ಕಾರ್ಡ್ ಹೊಸ ಲಿಸ್ಟ್ ಬಿಡುಗಡೆ ಮಾಡಿದ ಆಹಾರ ಇಲಾಖೆ; ಈ ಜನರ ಕಾರ್ಡ್ ರದ್ದಾಗಲಿದೆ
ಇಂದು ರೇಷನ್ ಕಾರ್ಡ್(Ration Card) ಅತೀ ಮುಖ್ಯವಾದ ದಾಖಲೆ ಎಂಬುದು ತಿಳಿದೆ ಇದೆ, ಇಂದು ಗ್ಯಾರಂಟಿ ಯೋಜನೆಗಳು ಆರಂಭ ವಾದ ನಂತರದಿಂದ ರೇಷನ್ ಕಾರ್ಡ್ ಗೆ ಬೇಡಿಕೆ ಕುಡ ಹೆಚ್ಚಾಗಿದೆ, ಅದರೆ ನಿಮ್ಮ ಕಾರ್ಡ್ ನಲ್ಲಿ ಸರಿಯಾದ ದಾಖಲೆ ಇದ್ರೆ ಮಾತ್ರ ರೇಷನ್ ಕಾರ್ಡ್ ಗೆ ಇರುವ ಸೌಲಭ್ಯ ಗಳು ನಿಮಗೆ ದೊರೆಯಲಿದೆ, ಗೃಹಜ್ಯೋತಿ ಮತ್ತು ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳ ಪರಿಣಾಮ ರಾಜ್ಯದಲ್ಲಿ ಹೊಸ ಪಡಿತರ ಕಾರ್ಡ್ಗಳಿಗೆ ಮಾತ್ರವಲ್ಲ, ಈಗ ಇರುವ ಕಾರ್ಡ್ಗಳ ತಿದ್ದುಪಡಿಗೆ ಕೂಡ ಬಹಳಷ್ಟು ಅರ್ಜಿ ಬಂದಿದೆ,
ರೇಷನ್ ಕಾರ್ಡ್ ರದ್ದು:
ಒಟ್ಟು 3 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ತಿದ್ದುಪಡಿಗೆ ಬಂದಿದೆ, ಇದರಲ್ಲಿ ಸುಮಾರು 1 ಲಕ್ಷ ರೇಷನ್ ಕಾರ್ಡ್ ತಿದ್ದುಪಡಿ ಅಗಿದ್ದು, ಸುಮಾರು 98 ಸಾವಿರಕ್ಕಿಂತ ಹೆಚ್ಚು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡದೇ ರದ್ದು (Ration card Ban) ಮಾಡಿದೆ, ವಾರ್ಷಿಕ ಆದಾಯ ಹೆಚ್ಚು ಇರುವ ಬಿಪಿಆರ್ ರೇಷನ್ ಕಾರ್ಡ್ ರದ್ದಾಗಿದೆ. ಇನ್ನುತಿದ್ದುಪಡಿಗೆ ಇತರರ ಹೆಸರನ್ನು ಕುಡ ನೀಡಿದ್ದು ಇದನ್ನು ಕೂಡ ರದ್ದು ಮಾಡಲಾಗಿದೆ.
ಇದನ್ನೂ ಸಹ ಓದಿ : ಬಿಟ್ಕಾಯಿನ್ ಪ್ರಕರಣ: ಇಬ್ಬರು ಆರೋಪಿಗಳ ಬಂಧನ! ಕರ್ನಾಟಕ ಎಸ್ಐಟಿ ಅಧಿಕಾರಿಗಳಿಂದ ಮಾಹಿತಿ
ಅರ್ಹಲ್ಲದ ಫಲಾನುಭವಿಗಳು:
ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕಾರ್ಡ್ಗಳ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದಾರೆ, ಆದರೆ, ಬಿಪಿಎಲ್ ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದು ಇವುಗಳ ದಾಖಲೆ ಯನ್ನು ಪರಿಶೀಲನೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಚೆಕ್ ಮಾಡಿ
ಈಗಾಗಲೇ ಕೆಲವರ ರೇಷನ್ ಕಾರ್ಡ್ ರದ್ದು ಆಗಿದ್ದು ಲಿಸ್ಟ್ ಕೂಡ ಬಿಡುಗಡೆ ಮಾಡಲಾಗಿದೆ.ನಿಮ್ಮ ಕಾರ್ಡ್ ಚಾಲ್ತಿಯಲ್ಲಿ ಇದೆಯಾ ಎಂದು ತಿಳಿಯಲು ಆಹಾರ ಇಲಾಖೆ ಯ ವೆಬ್ ಸೈಟ್ ಮೂಲಕ ಚೆಕ್ ಮಾಡಬಹುದಾಗಿದೆ, ಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಕೂಡ ಶೀಘ್ರದಲ್ಲೇ ನಡೆಯಲಿದ್ದು ಪರಿಶೀಲನೆ ಮಾಡಿ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಒಟ್ಟಿನಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವಾಗ ಸರಿಯಾದ ದಾಖಲೆಯನ್ನು ನೀಡಿ ನೀವು ಅರ್ಜಿ ಸಲ್ಲಿಸಬೇಕು, ಅಷ್ಟೆ ಅಲ್ಲದೆ ನಿಮ್ಮ ಮಾಹಿತಿಗಳು ಕೂಡ ನಿಖರವಾಗಿ ಇರಬೇಕು.