ಬಿಗ್‌ಬಾಸ್‌ ಎಲ್ಲಾ ದಾರಾವಾಹಿಗಳ ದಾಖಲೆ ಮುರಿಯುತ್ತಾ? ಟಿಆರ್‌ಪಿ ಅಸಲಿ ಆಟ ಪ್ರಾರಂಭ

0

ಬಿಗ್ ಬಾಸ್ ಕಿರುತೆರೆ ವೀಕ್ಷಕರಿಗೆ ಹಬ್ಬವಾಗಿದೆ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ನೋಡಲು ವೀಕ್ಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಈ ಸಲ ಬಿಗ್ ಬಾಸ್ ನಿಜಕ್ಕೂ ವಿಶೇಷ. ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ವೀಕ್ಷಕರ ಮುಂದೆ ಬಂದಿದೆ. ಇದರಲ್ಲಿ ಬಿಗ್ ಬಾಸ್ ಕೂಡ ಒಂದು. ಈ ಬಾರಿ ಸೀಸನ್ 10 ಆಗಿದ್ದರಿಂದ ಮನೆ ಕೂಡ ಬದಲಾಗಿದೆ. ಹೊಸದಾಗಿ ವಿನ್ಯಾಸಗೊಂಡು ವೀಕ್ಷಕರನ್ನು ಸೆಳೆಯುತ್ತಿದೆ.

bigg boss season 10 kannada

ಈ ಕಾರಣಕ್ಕೆ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಮೊದಲ ವಾರ ಎಷ್ಟು ಟಿಆರ್‌ಪಿ ಗಳಿಸಬಹುದು ಎಂಬ ಕುತೂಹಲ ಕಿರುತೆರೆ ವಲಯದಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೀಗ ಬ್ರೇಕ್ ಬಿದ್ದಿದೆ. ಆರಂಭದಲ್ಲಿ ಈ ರಿಯಾಲಿಟಿ ಶೋಗೆ ವೀಕ್ಷಕರು ಯಾವ ರೀತಿ ರೆಸ್ಪಾನ್ಸ್ ಕೊಟ್ಟಿದ್ದಾರೆ? ಎಷ್ಟು ಟಿಆರ್‌ಪಿ ಬಂದಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಎರಡನೇ ವಾರದಲ್ಲಿ ಬಿಗ್ ಬಾಸ್ ಸೀಸನ್ 10

ಅಕ್ಟೋಬರ್ 8 ರಂದು ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಆರಂಭಗೊಂಡಿತ್ತು. ಕಿಚ್ಚ ಸುದೀಪ್ ನಿರೂಪಕರಾಗಿ ತಮ್ಮ ಶೈಲಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಚಾಲನೆ ನೀಡಿದ್ದರು. ಕಳೆದ ಕೆಲವು ಸೀಸನ್‌ಗೆ ಹೋಲಿಸಿದರೆ ಈ ಬಾರಿ ಗ್ರ್ಯಾಂಡ್ ಓಪನಿಂಗ್ ಅನ್ನು ಒಂದೇ ದಿನಕ್ಕೆ ಮೀಸಲಾಗಿ ಇಡಲಾಗಿತ್ತು. ಒಂದೇ ದಿನದಲ್ಲೇ 17 ಮಂದಿಯನ್ನು ಮನೆಯೊಳಗೆ ಕಳುಹಿಸಿಕೊಡಲಾಗಿತ್ತು. ಅವರಲ್ಲಿ ಒಬ್ಬರು ಈಗಾಗಲೇ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಸಹ ಓದಿ: ಅನ್ನಭಾಗ್ಯ ಯೋಜನೆಯಲ್ಲಿ ಬದಲಾವಣೆ; ಇನ್ಮುಂದೆ ಅನ್ನಭಾಗ್ಯದ ಅಕ್ಕಿ ಮನೆ ಬಾಗಿಲಿಗೆ

ಮೊದಲ ದಿನ ಬಿಗ್‌ಬಾಸ್ ಟಿಆರ್‌ಪಿ ಎಷ್ಟು?

ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ದಿನದಿಂದಲೇ ಶುಭಾರಂಭ ಮಾಡಿದೆ. ಅಕ್ಟೋಬರ್ 8 ಭಾನುವಾರ ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಪ್ರಚಾರ ಆರಂಭ ಆಗಿತ್ತು. ಮೊದಲ ದಿನವೇ ಬಿಗ್ ಬಾಸ್ ರಿಯಾಲಿಟಿ ಶೋಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ದಿನ ಬಿಗ್ ಬಾಸ್‌ಗೆ ಸುಮಾರು 7.1 ಟಿಆರ್‌ಪಿ ಲಭಿಸಿದೆ. ಈ ಮೂಲಕ ಮತ್ತೆ ಕಲರ್ಸ್ ಕನ್ನಡಕ್ಕೆ ಹೊಸ ಇಮೇಜ್ ಸಿಕ್ಕಂತಾಗಿದೆ.

ಪ್ರಮುಖ ಧಾರಾವಾಹಿಗಳಿಗೆ ಆತಂಕ

ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಯಿಂದ ಪ್ರಮುಖ ಧಾರಾವಾಹಿಗಳು ಆತಂಕದಲ್ಲಿವೆ. ಭಾಗ್ಯಲಕ್ಷ್ಮಿ ಧಾರಾವಾಹಿಗೆ 6.3 ಪಾಯಿಂಟಿಗೆ ಸಿಕ್ಕದರೆ. ಅದೇ , ಲಕ್ಷ್ಮಿಭಾರಮ್ಮ 5.7 ರೇಟಿಂಗ್ ಬಂದಿದೆ. ಇನ್ನೊಂದು ಜೀ ಕನ್ನಡದಲ್ಲಿ ರಿಯಲಿಟಿ ಶೋ ‘ಸರೆಗಮಪ’ 8.2 ರೇಟಿಂಗ್ ಪಡೆದುಕೊಂಡಿದೆ. ಹಾಗೇ ‘ಪುಟ್ಟಕ್ಕನ ಮಕ್ಕಳು’ 9 ರೇಟಿಂಗ್, ‘ಸೀತಾರಾಮ’ 7.2 ರೇಟಿಂಗ್ ಗಳಿಸಿ ಬಿಗ್ ಬಾಸ್‌ಗಿಂತ ಮುಂದಿದೆ.

Leave A Reply

Your email address will not be published.