ಹೊಸ ಪಲ್ಲಕ್ಕಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಬಗ್ಗೆ ಸರ್ಕಾರದ ಸ್ಪಷ್ಟ ನಿರ್ಧಾರ
KSRTC ರಾಜ್ಯಾದ್ಯಂತ ಇತ್ತೀಚಿಗಷ್ಟೇ ಪ್ರಾರಂಭ ಮಾಡಿರುವಂತಹ ಪಲ್ಲಕ್ಕಿ ಬಸ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ಪ್ರಯಾಣಿಕರು ಕೂಡ ಸಾಕಷ್ಟು ಕುತೂಹಲದಿಂದ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಉದ್ಘಾಟನೆಯ ಮೂಲಕ ರಾಜ್ಯದ್ಯಂತ ಈಗಾಗಲೇ ಪಲ್ಲಕ್ಕಿ ಬಸ್ ಸೇವೆ ಪ್ರಾರಂಭವಾಗಿದೆ.
ಉಡುಪಿ, ಮಂಗಳೂರು, ಶಿವಮೊಗ್ಗ, ಪುತ್ತೂರು, ಬೀದರ್, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಯಾದಗಿರಿ, ರಾಯಚೂರು ಸೇರಿದಂತೆ ಸಾಕಷ್ಟು ಪ್ರಮುಖ ನಗರಗಳಲ್ಲಿ ಪಲ್ಲಕ್ಕಿ ಬಸ್ ಸೇವೆ ಈಗಾಗಲೇ ಪ್ರಾರಂಭವಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಕೂಡ ಪಲ್ಲಕ್ಕಿ ಬಸ್ ಸೇವೆಯನ್ನು ನಿಗದಿಪಡಿಸಲಾಗಿದೆ. ಪಾಂಡಿಚೆರಿ, ಚೆನ್ನೈ ಹಾಗೂ ಕೊಯಮುತ್ತೂರು ನಂತಹ ಹೊರ ರಾಜ್ಯಗಳ ಪ್ರದೇಶಗಳಿಗೂ ಕೂಡ ಹೋಗುವಂತಹ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ 50 ಸೀಟುಗಳಿಗೆ ಸ್ಪೇಸ್ ಅನ್ನು ಕಡಿತಗೊಳಿಸಲಾಗಿದ್ದು ಚಾರ್ಜಿಂಗ್ ಪೋರ್ಟ್ ಅನ್ನು ಕೂಡ ಕಾಣಬಹುದಾಗಿದೆ.
ಇದನ್ನೂ ಸಹ ಓದಿ : ಅಡಿಕೆ ತೋಟಗಳಿಗೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ
ಈ ಬಸ್ಸಿನ ಬೆಲೆ 45 ಲಕ್ಷ ರೂಪಾಯಿಗಳಾಗಿದ್ದು Ashok Leyland ಕಂಪನಿಯ ಬಸ್ಸುಗಳಾಗಿವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕರ್ನಾಟಕದ ಸರ್ಕಾರಿ ಸಾರಿಗೆ ನಿಗಮಕ್ಕೆ ಪ್ರೀಮಿಯಂ ಲೆವೆಲ್ ನ ಬಸ್ಸುಗಳು ಸಿಕ್ಕಿವೆ. ಇದರಲ್ಲಿ ಮಹಿಳೆಯರು ಈ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದಾ ಇಲ್ವಾ ಎಂದು ತಿಳಿದುಕೊಳ್ಳೋಣ.
ಮಾಹಿತಿಯ ಪ್ರಕಾರ ಪಲ್ಲಕ್ಕಿ ಬಸ್ಸುಗಳಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ, ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಟಿಕೆಟ್ ಪಡೆದರೆ ಮಾತ್ರ ಈ ಬಸ್ಸುಗಳಲ್ಲಿ ಮಹಿಳೆಯರು ಪ್ರಯಾಣ ಮಾಡಬಹುದಾಗಿದೆ. ಟಿಕೆಟ್ ದರಕ್ಕಿಂತ ಹೆಚ್ಚಾಗಿ ಆರಾಮದಾಯಕ ಪ್ರಯಾಣಕ್ಕಾಗಿ ಪಲ್ಲಕ್ಕಿ ಬಸ್ಸುಗಳು ಖಂಡಿತವಾಗಿ ಮುಂದಿನ ದಿನಗಳಲ್ಲಿ ಸಹಕಾರಿಯಾಗಲಿದೆ.