ಬಿಬಿಎಂಪಿ ಅಧಿಕಾರಿಗಳಿಂದ ನಿಯಮ ಉಲ್ಲಂಘಿಸಿದ ನಗರದ ಬಾರ್, ಪಬ್‌ಗಳಿಗೆ ನೋಟಿಸ್ ಜಾರಿ

0

ಈ ಸಂಸ್ಥೆಗಳು ಬಿಬಿಎಂಪಿಯಿಂದ ಟ್ರೇಡ್ ಲೈಸೆನ್ಸ್ ಪಡೆಯಬೇಕಿದ್ದು, ಹಲವು ಪಬ್‌ಗಳು ಮತ್ತು ಬಾರ್‌ಗಳು ತಮ್ಮ ಪರವಾನಗಿಯನ್ನು ನವೀಕರಿಸಲು ವಿಫಲವಾಗಿವೆ ಎಂದು ಹಲವಾರು ವರದಿಗಳಿವೆ. ಆದ್ದರಿಂದ ನಿಯಮಗಳನ್ನು ನಿರ್ಲಕ್ಷಿಸಿದ ಬಿಬಿಎಂಪಿ ಆರೋಗ್ಯಾಧಿಕಾರಿಗಳು ನಗರದ ಬಾರ್, ಪಬ್‌ಗಳಿಗೆ ನೋಟಿಸ್ ಜಾರಿ ಮಾಡಿವೆ.

Notice issued to bars and pubs in the city for violating BBMP rules
Notice issued to bars and pubs in the city for violating BBMP rules

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿರುವ ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಆರೋಗ್ಯಾಧಿಕಾರಿಗಳು ಶುಕ್ರವಾರ ತಪಾಸಣೆ ನಡೆಸಿ ಮಹಾನಗರ ಪಾಲಿಕೆಯ ನಿಯಮಾವಳಿಗಳನ್ನು ಅನುಸರಿಸದ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಬಿಬಿಎಂಪಿಯ ಪರವಾನಗಿ ನಿಯಮಗಳು ಉಲ್ಲಂಘಿಸಿದ ಮಳಿಗೆಗಳನ್ನು ತಕ್ಷಣವೇ ಮುಚ್ಚುವಂತೆ ಆದೇಶಿಸಲಾಗಿದೆ.

ಕೋರಮಂಗಲದ ಪಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶುಕ್ರವಾರ ನಗರದಾದ್ಯಂತ 232 ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಸಿತು. ಈ ಸಂಸ್ಥೆಗಳು ಬಿಬಿಎಂಪಿಯಿಂದ ಟ್ರೇಡ್ ಲೈಸೆನ್ಸ್ ಪಡೆಯಬೇಕಿದ್ದು, ಹಲವು ಪಬ್‌ಗಳು ಮತ್ತು ಬಾರ್‌ಗಳು ತಮ್ಮ ಪರವಾನಗಿಯನ್ನು ನವೀಕರಿಸಲು ವಿಫಲವಾಗಿವೆ ಎಂದು ಹಲವಾರು ವರದಿಗಳಿವೆ.

ಇದನ್ನೂ ಸಹ ಓದಿ : ಕರ್ನಾಟಕದಲ್ಲಿ ಪಟಾಕಿ ನಿಷೇಧ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ; ಗೃಹ ಸಚಿವ ಜಿ ಪರಮೇಶ್ವರ

ಬಿಬಿಎಂಪಿ ತನ್ನ ಆಡಳಿತ ವ್ಯಾಪ್ತಿಯಲ್ಲಿ 1,118 ವ್ಯಾಪಾರ ಸಂಸ್ಥೆಗಳಿಗೆ ಪರವಾನಗಿ ನೀಡಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ತಂಡ ಶುಕ್ರವಾರ 232 ಮಳಿಗೆಗಳನ್ನು ಪರಿಶೀಲಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿಯಮಾವಳಿಗಳನ್ನು ಅನುಸರಿಸಲು ವಿಫಲವಾದ 86 ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಪರಿಶೀಲನೆಯ ವೇಳೆ 12 ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಬಿಬಿಎಂಪಿ ಉಲ್ಲೇಖಿಸಿದೆ.

ಪಾಲಿಕೆ ಅಧಿಕಾರಿಗಳು ತಪಾಸಣೆ ನಡೆಸಿದ 232 ಪಬ್ ಮತ್ತು ಬಾರ್‌ಗಳಲ್ಲಿ 86 ಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, 12 ಬಂದ್ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ (20), ಪೂರ್ವದಲ್ಲಿ (18) ಅತಿ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ಪೂರ್ವ ವಲಯದಲ್ಲಿ ಸುಮಾರು ಏಳು ಸಂಸ್ಥೆಗಳು, ಮಹದೇವಪುರದಲ್ಲಿ ಮೂರು ಮತ್ತು ಬೊಮ್ಮನಹಳ್ಳಿಯಲ್ಲಿ ಎರಡು ಸಂಸ್ಥೆಗಳನ್ನು ಮುಚ್ಚಲಾಗಿದೆ. ಬಿಬಿಎಂಪಿಯಿಂದ ಸುಮಾರು 1,118 ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ವ್ಯಾಪಾರ ಪರವಾನಗಿ ನೀಡಲಾಗಿದೆ. 

Leave A Reply

Your email address will not be published.